ಬ್ರೇಕಿಂಗ್ ನ್ಯೂಸ್
ದೇಶ

Chat GPT : ಒಂದು ವರ್ಷ ಫ್ರೀ ಯಾಗಿ ‘ಚಾಟ್ ಜಿಪಿಟಿ ಗೊ’ : ದೇಶದ ಬಳಕೆದಾರರಿಗೆ ಹೊಸ ಆಫರ್

Chat GPT : ಚಾಟ್ ಜಿಪಿಟಿ ಬಳಕೆ ಬಂದ ನಂತರ ಜನರು ಪ್ರತಿಯೊಂದು ಮಾಹಿತಿಗಾಗಿ ಈ ಅಫ್ಲಿಕೇಶನ್ ಉಪಯೋಗಿಸುತ್ತಾರೆ.‌ ಕ್ಷಣಮಾತ್ರದಲ್ಲಿ ನಿಮಗೆ ಇದು ಮನುಷ್ಯರಂತೆ ಸಂಭಾಷಣೆ ನಡೆಸಲು, ಪ್ರಶ್ನೆಗಳಿಗೆ ಉತ್ತರ ನೀಡಲು, ಮಾಹಿತಿ ನೀಡಲು, ಬರಹ ರಚಿಸಲು, ಕೋಡ್ ಬರೆಯಲು ಮತ್ತು ಇನ್ನಿತರ ಹಲವು ಕೆಲಸಗಳಿಗೆ ಬಳಸಲಾಗುತ್ತದೆ. ಸ್ವರಚಿತ ಕಥೆಯಂತೆ ಕೆಲವೊಮ್ಮೆ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ನಾವು ನೀಡಿದ ವಿಷಯಕ್ಕೆ ತಿಳಿಸಿದ ಪದಗಳ‌ ಮಿತಿಯೊಳಗೆ ಕಳುಹಿಸಿಕೊಡುತ್ತದೆ. ಅಲ್ಲದೇ, ನೈಸರ್ಗಿಕ ಭಾಷೆಯಲ್ಲಿ ಸಂಭಾಷಣೆ ಮಾಡುವುದು, ನಿಮಿಷ ನಿಮಿಷಕ್ಕೂ ನಡೆಯುವ ಘಟನೆಗಳ ಬಗ್ಗೆ, ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ, ಅನುವಾದ ಮಾಡುವಲ್ಲಿ,‌ ಫ್ಲಾನಿಂಗ್ ಅಥವಾ ಯೋಜನೆಗಳನ್ನು ನೀಡುವಲ್ಲಿ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ.

ಇಂದಿನಿಂದ ಆರಂಭಗೊಳ್ಳಲಿರುವ ಒಂದು ವರ್ಷ ಉಚಿತ ಚಾಟ್ ಜಿಪಿಟಿ ಗೊ ಆಫರ್ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹೊಸತಾಗಿ ಬಂದಿರುವ ಈ ಫ್ಲಾನ್ ನಲ್ಲಿ ನೀವು ಫ್ರೀ ರೂಪದಲ್ಲಿ ಇದ್ದಾಗ ಉದಾ: ಉಚಿತ ಪ್ಲ್ಯಾನ್ ಪಡೆದಿರುವಾಗ ಕೆಲವು ಮಿತಿಗಳನ್ನು ಮೀರಿ ಹೆಚ್ಚಿನ ಬಳಕೆಮಾಡಲು, ಕಡಿಮೆ ಬೆಲೆಯ ಈ ಪ್ಲ್ಯಾನ್ ನ್ನು ಆಯ್ಕೆ ಮಾಡಬಹುದಾಗಿದೆ.ಈ ಪ್ಲಾನ್‌ನಲ್ಲಿರುವ ವಿಶೇಷತೆಗಳು ಏನಂದ್ರೆ: ಉತ್ತಮ-ಮಾಡೆಲ್‌ಗಳು (ಉದಾಹರಣೆಗೆ GPT‑5) ಬಳಸುವುದು, ಚಿತ್ರ ರಚನೆ(Image Generation) ಹೆಚ್ಚಿಸುವ ಸಾಮರ್ಥ್ಯ, ಫೈಲ್ ಅಪ್ಲೋಡ್ & ವಿಶ್ಲೇಷಣೆ (file upload & analysis) ಇವೆಲ್ಲವುಗಳ ಮಿತಿಯನ್ನು ಹೆಚ್ಚಿಸುವಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಈ ಅಫ್ಲಿಕೇಶನ್ ನನ್ನು ಅನುಸರಿಸುವ ಮೊದಲ ಹಂತದಲ್ಲಿ ವೆಬ್ ಬ್ರೌಸರ್ ನಲ್ಲಿ ಚಾಟ್ ಜಿಪಿಟಿ ಅಂತ ಟೈ ಮಾಡಿ ಓಪನ್ ಮಾಡಿಕೊಳ್ಳಬೇಕು. ಮೊಬೈಲ್ ಸ್ಕ್ರೀ ಮೇಲಿರು ಉಚಿತ ಅಪ್ ಗ್ರೇಡ್ ಗಾಗಿ ಕ್ಲಿಕ್ ಮಾಡಿ, ಅಪ್ ಗ್ರೇಡ್ ಟು‌ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕೆಲವೊಂದು ದಾಖಲೆಗಳನ್ನು ಕೇಳಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ, ಇ ಮೇಲ್ ಐಡಿ ಹಾಗೂ ಓಟಿಪಿ ಮುಖಾಂತರ ಇದರೊಳಗೆ ನೀವು ಪ್ರವೇಶಿಸಿ ಒಂದು ವರ್ಷಗಳ‌ ಕಾಲ ಇದರ ಹೊಸ ಫೀಚರ್ಸ್ ಗಳನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : BBK12: ನೀನು ನಿನ್ನ ಪಾಡಿಗೆ ಇದ್ಬಿಡು..ಪ್ಲೀಸ್..ಸೂರಜ್‌ ಗೆ ರಾಶಿಕಾ ಡೈರೆಕ್ಟ್‌ ಹೇಳಿದ್ಯಾಕೆ..?

………….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=Cw_WNjO2Q5LLS_FT

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page