PAN Card : ಪ್ಯಾನ್ ಕಾರ್ಡ್ ನ್ನು ಆದಾಯ ತೆರಿಗೆ ಸಂಬಂಧಿತ ಎಲ್ಲ ವ್ಯವಹಾರಗಳಿಗಾಗಿ ವ್ಯಕ್ತಿ ಅಥವಾ ಸಂಸ್ಥೆಯ ಗುರುತೀಕರಣಕ್ಕಾಗಿ ಉಪಯೋಗಿಸಲಾಗುತ್ತದೆ. ಇದು ಹಣಕಾಸು ವ್ಯವಹಾರಗಳನ್ನು ಟ್ರ್ಯಾಕ್ ಮಾಡಲು ಹಾಗೂ ಕಪ್ಪು ಹಣವನ್ನು ತಡೆಗಟ್ಟಲು ಹೆಚ್ಚಿನ ಪಾರದರ್ಶಕತೆಯನ್ನು ತೋರುವಲ್ಲಿ ಸಹಾಯಕವಾಗಿದೆ. ಆನ್ ಲೈನ್ ಮುಖಾಂತರ ಬಹಳ ಸುಲಭವಾಗಿ ಕೈಗೆಟುಕುವ ದರದಲ್ಲಿ ಪಾನ್ ಕಾರ್ಡ್ ಮಾಡಿಕೊಡಲಾಗುವುದು ಮತ್ತು ಇದು ಖಡ್ಡಾಯವೂ ಹೌದು. ಪ್ರತಿಯೊಂದುಹಣಕಾಸಿನ ವೈವಾಟಿಗೆ ಎಲ್ಲದಕ್ಕೂ ಪ್ಯಾನ್ ಕಾರ್ಡ್ ನ ಅನಿವಾರ್ಯವಿದೆ.
ಬಹು ಪ್ಯಾನ್ ಕಾರ್ಡ್ ಇರುವುದು ದಂಡನೀಯ. ಒಬ್ಬ ವ್ಯಕ್ತಿಗೆ ಒಂದೇ ಪ್ಯಾನ್ ಕಾರ್ಡ್ ಹಾಗೂ ಅದು ಜೀವನಪರ್ಯಂತ ಮಾನ್ಯವಾಗಿಯೇ ಉಳಿಯುವಂತದ್ದು. ಕೆಲವೊಮ್ಮೆ ವಿಳಾಸ ಅಥವಾ ದಾಖಲೆ, ಫೋಟೋದಲ್ಲಿ ತಿದ್ದುಪಡಿ ಮಾಡಬಹುದೇ ಹೊರತು, ಅದನ್ನು ಹೊಸತ್ತಾಗಿ ಮತ್ತೊಂದು ಬಾರಿ ನವೀಕರಿಸುವ ಅಗತ್ಯವಿರುವುದಿಲ್ಲ.
ಆದಾಯ ತೆರಿಗೆ ಇಲಾಖೆಯು ಸಾರ್ವಜನಿಕರಿಗೆ ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಮಾಡಲು ಡಿಸೆಂಬರ್ 31, 2025 ರ ತನಕ ಗಡುವು ನೀಡಿರುತ್ತದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ಜನವರಿ 1, 2026 ರಿಂದ ನಿಷ್ಕ್ರಿಯಗೊಳಿಸಲಾಗುವುದು. ಇದು ಮುಂದೆ ನಿಮ್ಮ ಎಲ್ಲಾ ತೆರನಾದ ವ್ಯವಹಾರ, ಮುಖ್ಯವಾಗಿ ಹಣಕಾಸಿನ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ವರದಿಯಾಗಿದೆ.
ಪ್ಯಾನ್ ಕಾರ್ಡ್ ನ್ನು ಆದಾಯ ತೆರಿಗೆ ಸಲ್ಲಿಕೆಯ ಸಮಯ, ಹೊಸ ಬ್ಯಾಂಕ್ ಖಾತೆ ತೆರೆಯುವಾಗ, ರೂ. 50,000 ಕ್ಕಿಂತ ಹೆಚ್ಚು ಮೌಲ್ಯದ ವ್ಯವಹಾರಗಳನ್ನು ನಡೆಸುವಾಗ, ಶೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್ ಹೂಡಿಕೆಗಳು, ಹೊಸ ಜಮೀನು ಅಥವಾ ಕಟ್ಟಡ ಖರೀದಿ ಅಥವಾ ಮಾರಾಟ ಸಂದರ್ಭಗಳಲ್ಲಿ ಬೇಕೆ ಬೇಕಾಗುತ್ತದೆ. ಹಾಗಾಗಿ, ಆಧಾರ್ ಜೊತೆ ಈಗಲೇ ನೀವು ನಿಮ್ಮ ಪ್ಯಾನ್ ಕಾರ್ಡ್ ನ್ನು ಲಿಂಕ್ ಮಾಡಿಸುವುದು ಉತ್ತಮ.
ಆಧಾರ್ ನ್ನು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸುವ ಪೋರ್ಟಲ್ : https://www.income tax.gov.in/IEC
ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಮಾಡುವ ಇ-ಫೈಲ್ ಪೋರ್ಟಲ್ : https:/www.incometax.gov.in/iec/forportal/
ಇದನ್ನೂ ಓದಿ : BBK12: ನೀನು ನಿನ್ನ ಪಾಡಿಗೆ ಇದ್ಬಿಡು..ಪ್ಲೀಸ್..ಸೂರಜ್ ಗೆ ರಾಶಿಕಾ ಡೈರೆಕ್ಟ್ ಹೇಳಿದ್ಯಾಕೆ..?
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=Cw_WNjO2Q5LLS_FT











