Bangalore : ಬೆಂಗಳೂರಿನಲ್ಲಿ ಕಸದ ರಾಶಿಯ ಬಗ್ಗೆ ಇತ್ತೀಚೆಗಷ್ಟೇ ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಅಧಿಕಾರಿಗಳು ದಂಡ ವಸೂಲಿ ಮಾಡಿದ್ದರು. ಸಂಸ್ಥೆಯು ಈ ವರೆಗೆ 800 ಕ್ಕೂ ಅಧಿಕ ಬ್ಲಾಕ್ ಸ್ಪಾಟ್ ಗಳನ್ನು ಸ್ವಚ್ಛಗೊಳಿಸಿದ್ದು, ಸಾಕಷ್ಟು ಜಾಗೃತಿ, ಅಭಿಯಾನದ ಬಳಿಕ ಕೂಡಾ ಜನರು ರಸ್ತೆ ಬದಿಗಳಲ್ಲಿ ಕಸಗಳನ್ನು ಎಸೆದು ಹೋಗುತ್ತಾರೆ. ನಿಮ್ಮ ಯಾವುದೇ ಮಾಹಿತಿ, ಜಾಗೃತಿಗಳಿಗೆ ಜನತೆ ತಿರುಗಿಯೋ ನೋಡುದಿಲ್ಲ ಮತ್ತು ಕೇಳಿಸಿಕೊಳ್ಳುವುದಿಲ್ಲ ಎಂಬ ಬೇಸರದಲ್ಲಿದೆ ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಅಧಿಕಾರಿಗಳು.
ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನ ತ್ಯಾಜ್ಯಗಳು ದೊರೆಯುವ ಕಾರಣ ಜನರೂ ಕೂಡಾ ಕಸ ವಿಲೇವಾರಿಯ ಬಗ್ಗೆ ಜಾಗೃತ ವಹಿಸಬೇಕಾಗುತ್ತದೆ. ಸಿಕ್ಕಸಿಕ್ಕಲ್ಲಿ ಕಸ ಹಾಕೋದು, ಮನೆ ಮುಂದೆಯೇ ರಾಶಿ ರಾಶಿ ಪ್ಲಾಸ್ಟಿಕ್ ಗಳು, ಎಲ್ಲೆಂದರಲ್ಲಿ ವೇಸ್ಟ್ ಬಿಸಾಡುವ ಬೆಂಗಳೂರಿನ ಜನರಿಗೆ ಬಿಎಸ್ ಡಬ್ಲೂ ಎಂಎಲ್ ವಾಟ್ಸಾಪ್ ನಂಬರ್ (ಮೊಬೈಲ್ ಸಂಖ್ಯೆ : 9448197197) ಗೆ ವೀಡಿಯೋ ಕಳುಹಿಸಿದ್ದಲ್ಲಿ ರೂ.250 ಬಹುಮಾನ ನೀಡುವುದಾಗಿ ಮಾಸ್ಟರ್ ಪ್ಲಾನ್ ಮಾಡಿರುತ್ತದೆ. ಇದು ಕಸ ಬಿಸಾಡುವುದನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ವೀಡಿಯೋ ಮಾಡಿ ಕಳುಹಿಸಿದರೆ ತದ ನಂತರ ಕಸ ಯಾರು ಎಲ್ಲೆಂದರಲ್ಲಿ ಹರಡುತ್ತಾರೆ ಅನ್ನೋದರ ಬಗ್ಗೆ ಮಾಹಿತಿ ತೆಗೆಯಬಹುದಾಗಿದೆ.
ಬೇಜಾವಬ್ದಾರಿಯಿಂದ ಎಸೆಯುವ ತ್ಯಾಜ್ಯಗಳಿಗೆ ರೂ. 1,000 ದಿಂದ 10,000 ರೂ. ತನಕ ದಂಡವನ್ನು ಸಂಗ್ರಹಿಸಲಾಗುತ್ತಿದೆ. ಹಾಗಾಗಿ, 250 ರೂ. ವನ್ನು ಕೊಡುವುದು ಅಷ್ಟೇನು ಕಷ್ಟವಾಗುದಿಲ್ಲ ಮತ್ತು ಇದನ್ನು ಬಂದಿರುವ ದಂಡದ ಹಣದಿಂದಲೇ ಪಾವತಿ ಮಾಡಲಾಗುವುದು ಎಂದು ವರದಿಯಾಗಿರುತ್ತದೆ. ಹೀಗಾಗಿ ವೀಡಿಯೋ ಹಂಚಿಕೊಳ್ಳುವವರು ತಮ್ಮ ಯುಪಿಐ ಖಾತೆ ಮೂಲಕ ಬಹುಮಾನ ರೂಪದಲ್ಲಿ ಹಣ ನೀಡಲಾಗುವುದು ಎಂದು ಚಿಂತನೆ ನಡೆಸಲಾಗಿದೆ. ಅಲ್ಲದೇ ವೀಡಿಯೋ ಚಿತ್ರೀಕರಿಸಿದವರ ಬಗ್ಗೆಯಾಗಲೀ, ವೀಡಿಯೋ ಕಳಿಹಿಸಿದವರ ಬಗ್ಗೆಯಾಗಲೀ ಮಾಹಿತಿಯನ್ನು ರಹಸ್ಯವಾಗಿಯೇ ಇಡಲಾಗುವುದು ಎಂದು ಜಿಬಿಎ ಯ ಐಟಿ ತಂಡದ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ : Friendship After Breakup: ಬ್ರೇಕಪ್ ನಂತ್ರ ex ಪ್ರಿಯಕರನೊಂದಿಗೆ ಸ್ನೇಹ ಒಳ್ಳೆಯದಾ..?
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=Cw_WNjO2Q5LLS_FT











