Pavithra Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಇದೀಗ ಕೇಸ್ ನ ಆದೇಶ ಮತ್ತೆ ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬ್ರೇಕಪ್ ನಂತ್ರ ex ಪ್ರಿಯಕರನೊಂದಿಗೆ ಸ್ನೇಹ ಒಳ್ಳೆಯದಾ..?
ಗುರುವಾರ ಅರ್ಜಿ ವಿಚಾರಣೆ..!
ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದೇಶ ಮತ್ತೆ ಪರಿಶೀಲನೆ ಮಾಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಗೆ ಆರೋಪಿ ಪವಿತ್ರಾ ಗೌಡ ಅರ್ಜಿ ಸಲ್ಲಿಸಿದ್ದಾರೆ. ಇದರ ಅನ್ವಯ ಸುಪ್ರೀಂ ಕೋರ್ಟ್ ಗುರುವಾರ ಅರ್ಜಿ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಈ ಬಗ್ಗೆ ವಕೀಲ ಅನಿಲ್ ನಿಶಾನಿ ಪ್ರತಿಕ್ರಿಯೆ ನೀಡಿ, ಪವಿತ್ರ ಗೌಡ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ ಆದೇಶದ ಪುನರ್ ಪರಿಶೀಲನೆಗೆ ಕೋರಿದ್ದಾರೆ. ಮುಂಬರುವ ಗುರುವಾರ ನ್ಯಾ. ಪರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ. ಅರ್ಜಿ ಪ್ರತಿ ನೀಡಿದರೆ ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಯಲಿದೆ. ಚೇಂಬರ್ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ನಂತರ ಮುಂದಿನ ಪ್ರಕ್ರಿಯೆ ನಡೆಯಬಹುದು ಎಂಬ ಮಾಹಿತಿ ಇದೆ.
ದರ್ಶನ್ ಫುಲ್ ಆಕ್ಟಿವ್.. ಪವಿತ್ರಾಗೌಡ ಸೈಲೆಂಟ್ !
ಇನ್ನು ಕಳೆದ ದಿನ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ನಲ್ಲಿ ದೋಷಾರೋಪ ನಿಗದಿ ಪ್ರಕ್ರಿಯೆ ನಡೆಯಿತು. ಇದೇ ವೇಳೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದರು. ಕೋರ್ಟ್ಗೆ ಬರುವಾಗ ಟೆನ್ಷನ್ನಲ್ಲೇ ಇದ್ದ ಪವಿತ್ರಾ ಗೌಡ, ವಿಚಾರಣೆ ಮುಗಿಸಿ ಜೈಲಿಗೆ ತೆರಳಿ ಮೌನಕ್ಕೆ ಶರಣಾಗಿ ಕಣ್ಣೀರು ಹಾಕ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಕೋರ್ಟ್ ಆವರಣದಲ್ಲಿ ಪವಿತ್ರಾ ಗೌಡ, ದರ್ಶನ್ನನ್ನು ಮಾತಾಡಿಸಲು ಪ್ರಯತ್ನ ಪಟ್ಟಿದ್ರು. ಆದ್ರೆ ದರ್ಶನ್ ಮಾತಾಡಲಿಲ್ಲ ಎನ್ನಲಾಗಿದೆ. ಹಲವಾರು ತಿಂಗಳಿನಿಂದ ಇಬ್ಬರೂ ಜೈಲು ಸೇರಿ ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ತಾವು ಮಾಡಿದ ತಪ್ಪಿಗೆ ಜೈಲಿನಲ್ಲಿಯೇ ದಿನ ಕಳೆದು ಪರಿಸ್ಥಿತಿ ಇಬ್ಬರಿಗೂ ಸವಾಲಾಗಿದೆ. ಇನ್ನೆಷ್ಟು ದಿನ ಜೈಲಿನಲ್ಲಿರಬೇಕೋ ಕಾದುನೋಡಬೇಕು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











