Friendship After Breakup: ನಾವು ಜೀವನದ ಪ್ರತೀ ಹಂತದಲ್ಲಿಯೂ ಒಂದಲ್ಲಾ ಒಂದು ಗೆಳೆತನ ಬಯಸುತ್ತೇವೆ. ಜೀವನದ ಉದ್ದಕ್ಕೂ ಸ್ನೇಹ ಅನ್ನೋದು ಒಂದು ವ್ಯಕ್ತಿ ಜೊತೆ ಇದ್ದರೆ ಅದನ್ನು ಕಾಪಾಡಿಕೊಳ್ಳುತ್ತಾರೆ. ಇನ್ನು ಏನೋ ಒಂದು ಜಗಳ ಆಗಿ ಸ್ನೇಹಿತರು ದೂರ ಆಗಿ, ನಂತರ ಮತ್ತೆ ಹತ್ತಿರ ಆಗೋದು ಒಳ್ಳೆಯದಾ ಕೆಟ್ಟದ್ದಾ ಅನ್ನೋದು ನೋಡೋಣ..
ನಿಮ್ಮ ex ಜೊತೆ ಸಂಪರ್ಕದಲ್ಲಿದ್ದೀರಾ..?
ಲೈಫ್ ಅಂದ್ರೆ ಹಾಗೆಯೇ ಅಲ್ವ..ಪ್ರೀತಿ, ಪ್ರೇಮ, ಪ್ರಣಯಗಳು ಇದ್ದೇ ಇರುತ್ತೆ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಅನ್ನೋದು ಆಗಿಯೇ ಆಗಿರುತ್ತೆ. ಮೊದಲ ಪ್ರೀತಿಯ ನೆನಪು ಎಲ್ಲರಿಗೂ ಒಂದಲ್ಲಾ ಒಂದು ರೀತಿ ಕಾಡುವುದು ಸತ್ಯ. ಇನ್ನು ನೀವು ಪ್ರೀತಿಯಿಂದ ಮೋಸ ಹೋಗಿರಲೂ ಬಹುದು. ಅದೇ ರೀತಿ ಪ್ರೀತಿ ಮಾಡಿ, ಯಾವುದೋ ಕಾರಣಕ್ಕೆ ದೂರ ಆಗಿ ಪರಸ್ಪರ ದೂರ ಆಗಿ ಬೇರೊಬ್ಬರ ಜೊತೆ ಸಂಬಂಧ ಶುರು ಮಾಡುವ ಮಂದಿ ಅನೇಕ ಇದ್ದಾರೆ. ಇನ್ನು ಕೆಲವರು ಮೂವ್ ಆನ್ ಆಗಿ ಮುಂದುವರೆಯುವವರು ಅನೇಕರಿದ್ದಾರೆ. ಸಾಕಷ್ಟು ಮಂದಿ ಒಬ್ಬರನ್ನು ಪ್ರೀತಿ ಮಾಡಿ, ಇನ್ನೊಬ್ಬರನ್ನು ಮದುವೆಯಾಗುವ ಮಂದಿ ನಮ್ಮಲ್ಲಿ ಅನೇಕರಿದ್ದಾರೆ. ಹಾಗೆಯೇ ಬ್ರೇಕಪ್ ಆದ ನಂತರವೂ ನಿಮ್ಮ ex ಜೊತೆ ಸಂಬಂಧ ಹೊಂದಿದ್ದರೆ ಖಂಡಿತಾ ಒಳ್ಳೆಯದಲ್ಲ. ಇದರಿಂದ ನಿಮ್ಮನ್ನೇ ನಂಬಿ ಬಂದ ಹುಡುಗಿ ಅಥವಾ ಹುಡುಗನಿಗೆ ನೀವೇ ಮೋಸ ಮಾಡುತ್ತೀರಿ. ಇನ್ನು ನಿಮ್ಮ ಹಿಂದಿನ ಘಟನೆಗಳ ಬಗ್ಗೆ ಓಪನ್ ಆಗಿ ನಿಮ್ಮ ಪ್ರಸ್ತುತ ಸಂಗಾತಿಯ ಜೊತೆ ಹೇಳಿಕೊಂಡರೆ ನಿಮ್ಮ ಮೇಲೆ ನಿಮ್ಮ ಸಂಗಾತಿಗೆ ನಂಬಿಕೆ ಹುಟ್ಟುತ್ತದೆ. ಇದರಿಂದ ಭಿನ್ನಾಭಿಪ್ರಾಯ,ಜಗಳಗಳು ಉಂಟಾಗುವುದಿಲ್ಲ.
ಈ ಸ್ನೇಹದ ಬಗ್ಗೆ ತಜ್ಞರು ಹೇಳೋದೇನು..?
ಈ ಕುರಿತು ತಜ್ಞರಾದ ಡಾ. ಸಂಧ್ಯಾ ರಾಮನ್ ಹೇಳುವ ಪ್ರಕಾರ, ಪರಸ್ಪರ ಒಪ್ಪಿಗೆಯಿಂದ ಬ್ರೇಕ್ಅಪ್ ಆಯಿತೆಂದರೆ, ಇಬ್ಬರೂ ಶಾಂತವಾಗಿ ಬೇರ್ಪಡಲು ನಿರ್ಧರಿಸಿದ್ರೆ, ಈ ಸಂದರ್ಭಗಳಲ್ಲಿ ಇಬ್ಬರೂ ಪರಸ್ಪರ ಗೌರವ ಕಾಪಾಡುತ್ತಾರೆ. ಭಾವನೆಗಳನ್ನು ಸಮತೋಲನದಲ್ಲಿರಿಸುತ್ತಾರೆ. ಆದರೆ ಬ್ರೇಕ್ಅಪ್ ನೋವಿನಿಂದ ಕೂಡಿದ್ದರೆ, ಒಬ್ಬ ವ್ಯಕ್ತಿ ಇನ್ನೊಬ್ಬರ ಮೇಲೆ ದ್ರೋಹ ಮಾಡಿದರೆ, ತಕ್ಷಣ ಸ್ನೇಹದ ಪ್ರಯತ್ನ ಮಾಡುವುದು ಮನಶ್ಶಾಂತಿಯನ್ನು ಕಳೆದುಕೊಳ್ಳುವಂತಾಗಿದೆ.
ನಿಮ್ಮ ex ಜೊತೆ ಮತ್ತೆ ಚಾಟ್ ಮಾಡ್ತೀರಾ ಹುಷಾರು!
ಅಕಸ್ಮಾತ್ ಆಗಿ ಹಳೆಯ ಸಂಗಾತಿಯ ಜೊತೆ ಮಾತು ಶುರು ಮಾಡಿದರೆ ಹಳೆಯ ವಿಚಾರಗಳನ್ನು ಮತ್ತೆ ಚರ್ಚಿಸಬೇಡಿ, ಪರಸ್ಪರರಿಗೆ ರೂಲ್ಸ್ ಮಾಡಬೇಡಿ. ಆದ್ರೆ ನೀವು ಇನ್ನೂ ಕೋಪ, ಅಸೂಯೆ, ನೋವನ್ನು ಅನುಭವಿಸುತ್ತಿದ್ದರೆ, ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿ. ಬ್ರೇಕ್ಅಪ್ ನಂತರ ಸ್ನೇಹದಿಂದಾಗುವ ಅನಾನೂಕೂಲಗಳನ್ನು ನೋಡೋದಾದ್ರೆ, ನೀವು ಸ್ನೇಹದ ಹೆಸರಿನಲ್ಲಿ ಹಳೆಯ ಸಂಬಂಧದ ನೆನಪುಗಳಲ್ಲಿ ಸಿಲುಕಿಕೊಳ್ಳಬಹುದು. ಹಳೆಯ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವುದು ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನಂತೂ ನೀಡುವುದಿಲ್ಲ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











