BBK12: ಕನ್ನಡದ ಬಿಗ್ ಬಾಸ್ ಮನೇಲಿ ಈ ವಾರ ಕಂಪ್ಲೀಟ್ ಆಗಿ ಮಾತಿನಲ್ಲಿಯೇ ನಾಮಿನೇಟ್ ಮಾಡುವ ವಾರವಾಗಿದೆ. ಹೀಗಾಗಿ ಸ್ಪರ್ಧಿಗಳು ತಮ್ಮವರು ಅಂತ ನೋಡದೆಯೇ ನಾಮಿನೇಟ್ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಮತಧರ್ಮ ಮರೆತು ಕಂದಮ್ಮನಿಗೆ ಆಸರೆಯಾದ ಮಹಾತಾಯಿ!
ಈ ವಾರದಲ್ಲಿ ಯಾವುದೇ ಟಾಸ್ಕ್ಗಳು ಇರೋದಿಲ್ಲ ಎಂದು ಸುದೀಪ್ ಅವರು ಈ ಮೊದಲೇ ಹೇಳಿದ್ದರು. ಅದೇ ರೀತಿ ಈ ವಾರ ಯಾವುದೇ ಟಾಸ್ಕ್ ನಡೆಯುತ್ತಿಲ್ಲ. ಮೊದಲ ವಾರದಲ್ಲಿ ಯಾರು ಮನೆಯಲ್ಲಿರಲು ಅರ್ಹರಲ್ಲ ಎಂಬ ಚಟುವಟಿಕೆ ನೀಡಲಾಯಿತು. ಈಗ ಎರಡನೇ ದಿನ ಬಿಗ್ ಬಾಸ್ನಲ್ಲಿ ಮನೆಯವರು ಕಳುಹಿಸಿದ ಪತ್ರ ಓದೋ ಸಮಯ. ಆದರೆ, ಇಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಡಲಾಗಿದೆ.
ಇದನ್ನೂ ಓದಿ: ಓ ಮೈ ಗಾಡ್.. ಗಿಲ್ಲಿಗೆ ಹೊಡೆದ್ರಾ ರಿಷಾ ಗೌಡ..?
ಧನುಷ್ ಗೆ ಲೆಟರ್ ಓದೋಕೆ ಆಗಲ್ವಾ..?
ಕಳೆದ ಎಪಿಸೋಡ್ ನಲ್ಲಿ ಬಿಗ್ ಬಾಸ್ ಶೋಗೆ ಕಾಲಿಟ್ಟ ಮೊದಲ ದಿನದಿಂದಲೂ ಟಾಸ್ಕ್‌ಗಳಲ್ಲಿ ಧನುಷ್ ಒಳ್ಳೆಯ ಪರ್ಫಾಮೆನ್ಸ್ ಕೊಡುತ್ತಾ ಬಂದಿದ್ದಾರೆ. ರಘು ವಿರುದ್ಧ ಧನುಷ್ ಕ್ಯಾಪ್ಟನ್ ಆಗಲು ಸೆಣಸಾಡಬೇಕಿತ್ತು. ಆದರೆ, ಇಬ್ಬರ ಮಧ್ಯೆ ಟಾಸ್ಕ್ ಇಡದ ಬಿಗ್ ಬಾಸ್ ವೋಟಿಂಗ್ ಆಯೋಜಿಸಿಬಿಟ್ಟರು. ‘ಬಿಗ್ ಬಾಸ್’ ಮನೆಯಲ್ಲಿ ದ್ವೇಷ ಕಟ್ಟಿಕೊಳ್ಳದ ಧನುಷ್ ಕ್ಯಾಪ್ಟನ್ ಪಟ್ಟಕ್ಕೆ ಏರಿದ್ದಾರೆ. ಇದನ್ನ ಗಮನಿಸಿದ ವೀಕ್ಷಕರು ಭಾರೀ ಮೋಸ ಎಂದು ಕಾಮೆಂಟ್ ಹಾಕಿದ್ದರು.
ಇದನ್ನೂ ಓದಿ: ಗಿಲ್ಲಿ ನಟನ ಕಾಮಿಡಿ ಮೋಡಿಗೆ ಜನ ಗೆಲ್ಲಿಸ್ತಾರಾ…?
ಜನಗಳಿಗೆ ಧನುಷ್ ಕ್ಯಾಪ್ಟನ್ ಆದ ರೀತಿ ತೃಪ್ತಿ ಕೊಟ್ಟಿಲ್ಲ. ಇನ್ನು ಧನುಷ್ ಗೆ ಮನೆಯವರು ಕಳಿಸಿದ ಲೆಟರ್ ಓದೋಕೆ ಆಗಲ್ಲ ಅನ್ನೋದು ಬಿಡುಗಡೆ ಆದ ಪ್ರೋಮೋದಲ್ಲಿ ತಿಳಿಯುತ್ತದೆ. ಇದರಲ್ಲಿ ಧನುಷ್ ಮುಖ ಡಲ್ ಆಗಿರೋದು ಕಾಣಿಸುತ್ತದೆ. ಇನ್ನು ಧನುಷ್ ಆಟಗಳನ್ನು ಚೆನ್ನಾಗಿ ಆಡುತ್ತಿದ್ದಾರೆ. ಇದರಿಂದ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಆಟಗಳು ಪ್ರತೀ ದಿನ ಟಫ್ ಆಗುತ್ತಾ ಹೋಗುತ್ತಿದ್ದು, ಈ ಬಾರಿ ಅಷ್ಟೇನು ಜಗಳಗಳು ನಡೆಯುತ್ತಿಲ್ಲ.
ಇದನ್ನೂ ಓದಿ: ಕಿಚ್ಚನ ಜೊತೆ ಮಾಳು ಮನವಿ ಮಾಡಿದ್ದು ನಾಟಕೀಯವಾಗಿತ್ತಾ..?
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











