ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಬೆಳ್ತಂಗಡಿ

Belthangady: ತಲೆಮರೆಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಕೋರ್ಟ್‌ಗೆ ಹಾಜರ್!

Belthangady: ಕಳೆದ ಕೆಲವು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಿಮರೋಡಿ ಪತ್ತೆಯಾಗಿದ್ದು, 50 ದಿನಗಳ ನಂತರ ಮಹೇಶ್‌ ಶೆಟ್ಟಿ ತಿಮರೋಡಿ ಪ್ರತ್ಯಕ್ಷರಾಗಿ, ಬೆಳ್ತಂಗಡಿ ಕೋರ್ಟ್ ಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಹೆಚ್ಚು ಕೊಳಕಾದ ಬಟ್ಟೆಗಳಿಗೆ ಈ ನೀರು ಉತ್ತಮ‌ ಸಲಹೆ…!

50 ದಿನಗಳ ಬಳಿಕ ತಿಮರೋಡಿ ಹಾಜರ್..!

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ ಗೆ, ಸುಮಾರು 50 ದಿನಗಳ ಬಳಿಕ  ಹಾಜರಾಗಿದ್ದಾರೆ. ಧರ್ಮಸ್ಥಳದ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್‌ಐಟಿ ನೋಟಿಸ್‌ ಎದುರಿಸುತ್ತಿದ್ದಾರೆ. ಧರ್ಮಸ್ಥಳದ ಬುರುಡೆ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧ ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ನಾಲ್ವರಿಗೆ ವಿಶೇಷ ತನಿಖಾ ತಂಡ ನೋಟಿಸ್‌ ಜಾರಿ ಮಾಡಿತ್ತು.

ಇದನ್ನೂ ಓದಿ: ಓ ಮೈ ಗಾಡ್.. ಗಿಲ್ಲಿಗೆ ಹೊಡೆದ್ರಾ ರಿಷಾ ಗೌಡ..?

ವಿಚಾರಣೆಗೆ ಹಾಜರಾಗದಿದ್ರೆ ಬಂಧಿಸೋದಾಗೆ ಖಡಕ್‌ ವಾರ್ನಿಂಗ್‌ ಕೂಡ ಕೊಟ್ಟಿತ್ತು. ನಂತರ, ಬಿಎನ್‌ಎಸ್ಎಸ್ 35(3) ಅಡಿ ನೋಟಿಸ್‌ ನೀಡಿತ್ತು. ಕೆಲವು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿ, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್, ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಿನ್ನೆ ಕೋರ್ಟ್‌ ಗೆ ತೆರಳಿ ವಾರೆಂಟ್ ರೀಕಾಲ್ ಮಾಡಿ ತೆರಳಿದ್ದಾರೆ. ಉಜಿರೆ ಪ್ರದೇಶದಲ್ಲಿ ಸೌಜನ್ಯ ಪರವಾಗಿ ಬ್ಯಾನರ್ ಹಾಕಿದ್ದ ಕಾರಣ ತಿಮರೋಡಿ ಸೇರಿ 6 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಅಪಘಾತಕ್ಕೀಡಾಗಿ ಇತ್ತೀಚೆಗಷ್ಟೇ ನಿಧನರಾದ ಅಪೂರ್ವ ಭಟ್ ರ ತಂದೆಯೂ ನಿಧನ

ಈ ಹಿಂದೆ ಗಡಿಪಾರು ಮಾಡಲು ಆದೇಶ ನೀಡಲಾಗಿತ್ತು..!

ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರೂ ಜಾಮೀನು ಪಡೆಯದೇ ತಿರುಗಾಡುತ್ತಿದ್ದ ತಿಮರೋಡಿಗೆ ಬೆಳ್ತಂಗಡಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು.ಇನ್ನು ಕಳೆದ ಸೆ.18ರಂದು ತಿಮರೋಡಿಯನ್ನು ರಾಯಚೂರಿಗೆ ಗಡಿಪಾರು ಮಾಡಿ ಎಂದು ಆದೇಶಿಸಲಾಗಿತ್ತು. ಆದರೆ ಅದಾದ ಬಳಿಕ ಗಡಿಪಾರು ಆದೇಶ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ ತಿಮರೋಡಿ ಅರ್ಜಿ ಸಲ್ಲಿಸಿದ್ದರು. ನಂತರ ಕೋರ್ಟ್ ಗಡಿಪಾರು ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಸೌಜನ್ಯ ಪ್ರಕರಣದಲ್ಲಿ ಧ್ವನಿ ಎತ್ತಿ ಸಾರ್ವಜನಿಕ ವಲಯದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಲೇ ಇವೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:‌ https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page