Accident : ಒಂಬತ್ತು ತಿಂಗಳ ಹಿಂದೆ ಮಾಣಿ ಮೈಸೂರು ಹೆದ್ದಾರಿಯ ಮುರ ಎಂಬ ಪ್ರದೇಶದಲ್ಲಿ ಬಸ್ ಹಾಗೂ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತದ ಭೀಕರತೆ ಹೇಗಿತ್ತೆಂದರೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ತಂದೆ ಮಗಳು ಇಬ್ಬರೂ ಒಬ್ಬೊಬ್ಬರಾಗಿ ನಿಧನ ಹೊಂದುತ್ತಾರೆ. ಮೊದಲು 32 ವರ್ಷ ಹರೆಯದ ಅಪೂರ್ವ ಭಟ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಪೂರ್ವ ಭಟ್ ಕೊನೆಯುಸಿರೆಳೆಯುತ್ತಾರೆ. ಈ ಮಧ್ಯೆ ಕೆದಿಲ ಗ್ರಾಮದ ಅಂಡೆಪುಣಿ ನಿವಾಸಿ ಈಶ್ವರ ಭಟ್ (70) ಕೂಡಾ ಚಿಕಿತ್ಸೆ ಪಡೆಯುತ್ತಿದ್ದರು. ಮಗಳ ಸಾವಿನ ಆಘಾತದ ಜೊತೆಗೆ, ನಡೆದ ಅಪಘಾತದ ನೋವು ಇವರನ್ನೂ ಕೂಡ ಕಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ (ನ.03) ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಪೂರ್ವ ಭಟ್ 130 ದಿನಗಳಿಗೂ ಅಧಿಕ ಕಾಲ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆಯ ಸ್ಥಿತಿ ನೆನೆದು ಸಾಮಾಜಿಕ ಜಾಲತಾಣದಲ್ಲಿಯೂ ಅದೆಷ್ಟೋ ಜನರು ಬದುಕುಳಿಯಲು ಪ್ರಾರ್ಥಿಸಿದರು. ಪತಿ ಆಶೀಶ್ ಪಾರಡ್ಕ ಪ್ರತೀ ಕ್ಷಣ ಅಪೂರ್ವ ಭಟ್ ಮತ್ತೆ ಚೇತರಿಸಿಕೊಳ್ಳಲು ಮಾಡಿದ ಹರಕೆಗಳು ಯಾವುದೂ ಉಪಯೋಗಕ್ಕೆ ಬರಲಿಲ್ಲ. ವಿಧಿಯ ಆಟವೇ ಬೇರಾಗಿತ್ತು. ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತೂ ಕೂಡ.
ಅಪಘಾತದಲ್ಲಿ ಗಾಯಗೊಂಡಿದ್ದ ಈಶ್ವರ ಭಟ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರನ್ನು ಅಲ್ಲಿಂದ ಸ್ಥಳಾಂತರಗೊಳಿಸಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗಳ ಸಾವಿನ ನೋವಿಗೋ ಏನೋ ಗೊತ್ತಿಲ್ಲ. ಇವರೂ ಕೂಡಾ ನಿನ್ನೆ ಕೊನೆಯುಸಿರೆಳೆಯುತ್ತಾರೆ. ಮನೆಯವರಿಗೆ ಈಗ ಎರಡೆರಡು ಸಾವಿನ ಆಘಾತ. ಹೆಚ್ಚಿದ ನೋವು, ಜೊತೆಯಾಗಿ, ಕಾರಿನಲ್ಲಿ ಹೋದವರಲ್ಲಿ ಮಗು ಅಕಸ್ಮಾತ್ ಆಗಿ ಸಾವಿನಿಂದ ಪಾರಾಗಿರುತ್ತಾಳೆ.
ಇದನ್ನೂ ಓದಿ :Cloth Washing : ಹೆಚ್ಚು ಕೊಳಕಾದ ಬಟ್ಟೆಗಳಿಗೆ ಈ ನೀರು ಉತ್ತಮ ಸಲಹೆ…!
…………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/9SPfLPmVEeU?si=RMl06TK3WLJqGFGS











