ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಓ ಮೈ ಗಾಡ್.. ಗಿಲ್ಲಿಗೆ ಹೊಡೆದ್ರಾ ರಿಷಾ ಗೌಡ..?

BBK12: ಬಿಗ್‌ ಬಾಸ್‌ ಮನೇಲಿ ಗಿಲ್ಲಿ ಹಾಗೂ ರಿಷ ಗೌಡ ಮದ್ಯೆ ಜೋರಾದಂತಹ ಜಗಳವಾಗಿದೆ. ರಿಲೀಸ್ ಆದಂತಹ ಪ್ರೊಮೋ ದಲ್ಲಿ ರಿಷಾ ಗಿಲ್ಲಿಗೆ ಹೊಡೆದಿರುವುದು ಕಾಣಿಸುತ್ತದೆ. ಇದೀಗ ಈ ವೀಡಿಯೋ ನೋಡಿದಂತಹ ಜನ ಶಾಕ್ ಆಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಕಾಮಿಡಿಯಿಂದ ಜನರ ಮನಸ್ಸು ಗೆದ್ದರೆ ವೈಲ್ಡ್ ಕಾರ್ಡ್ ಎಂಟ್ರಿ ಆದಂತಹ ರಿಷಾ ಗೌಡ ಮನೆಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟು ಮನೆಯ ಒಳಗಡೆ ಪ್ರತಿದಿನ ಜಗಳವಾಡುತ್ತಾ ಇದ್ದಾರೆ. ಹೀಗಾಗಿ ಅವರು ಮನೆಗೆ ಬರುವುದಕ್ಕಿಂತ ಮುಂಚೆ ಏನೆಂದುಕೊಂಡಿದ್ದಾರೋ ಆ ರೀತಿ ಇಲ್ಲ. ಮನೆ ತುಂಬಾ ಜಗಳ ಆಗೋಕೆ ರಿಷಾ ಗೌಡ ಕಾರಣವಾಗುತ್ತಿದ್ದಾರೆ. ಇದನ್ನು ನೋಡಿದಂತಹ ಜನ ರಿಷಾ ಗೌಡ ಬಹಳ ಕಿರಿಕಿರಿ ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಗಿಲ್ಲಿಗೆ ಕಿರುಚಾಡಿ ಬೈಯ್ದ ರಿಷಾ ಗೌಡ..!

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದಕ್ಕಿಂತ ಮುಂಚೆ ರಿಷಾ ಗೌಡ ಅಷ್ಟೇನೂ ಖಾರವಾಗಿದ್ದಾರೆ ಅಂತ ಅನಿಸಲಿಲ್ಲ. ಆದರೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ರಿಷಾ ಗೌಡ ಸುಖ ಸುಮ್ಮನೆ ಎಲ್ಲರ ಜೊತೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದಾರೆ. ಇದರಿಂದ ಬಿಗ್ ಬಾಸ್ ಮನೆ ಒಳಗಿರುವಂತಹ ಸ್ಪರ್ಧಿಗಳಿಗೆ ರಿಷಾ ಗೌಡ ಕಿರಿಕಿರಿ ಆಗುತ್ತಿದ್ದಾರೆ. ಮನೆಯಲ್ಲಿ ಹೊಂದಿಕೊಳ್ಳಲು ರಿಷಾ ಗೌಡ ಕೂಡ ಕಷ್ಟಪಡುತ್ತಿದ್ದು, ತನ್ನ ಕೋಪವನ್ನು ಪ್ರತಿದಿನ ಒಂದಲ್ಲ ಒಂದು ಸ್ಪರ್ಧಿಯ ಮೇಲೆ ತೋರಿಸುತ್ತಿದ್ದಾರೆ. ಇದು ಬಿಗ್ ಬಾಸ್ ಗಮನಕ್ಕೂ ಬಂದಿದ್ದು ವೀಕೆಂಡ್ ಬರುವಾಗ ರಿಷಾ ಗೌಡ ಸುಮ್ಮನೆ ಇರುತ್ತಾರೆ. ಆದರೂ ಕೂಡ ಕಿಚ್ಚ ಸುದೀಪ್ ಅವರು ಕಳೆದ ವೀಕೆಂಡ್ ನಲ್ಲಿ ರಿಷಾ ಗೌಡ ಅವರಿಗೆ ಕಿವಿಮಾತು ಹೇಳಿದ್ದಾರೆ, ಆದರೂ ಕೂಡ ಇವರು ಬದಲಾಗಲಿಲ್ಲ.

ಗಿಲ್ಲಿ ಮೇಲೆ ಕೈ ಮಾಡಿದ ರಿಷಾ ಗೌಡ..!

ಇನ್ನು ಇಂದು ರಿಲೀಸ್ ಆದಂತಹ ಪ್ರೋಮೋದಲ್ಲಿ ರಿಷಾ ಗೌಡ ಸ್ನಾನಕ್ಕೆ ಹೋಗುವಾಗ ಗಿಲ್ಲಿ ನಟನ ಬಕೆಟ್ ಹಿಡಿದುಕೊಂಡು ಹೋಗಿದ್ದಾರೆ. ಹೀಗಾಗಿ ಗಿಲ್ಲಿ ಆಚೆಯಿಂದ ಬಕೆಟ್ ಕೊಡು ಎಂದು ಕೇಳಿದ್ದಾರೆ. ಇದಕ್ಕೆ ರಿಷಾ ಗೌಡ ಸುಮ್ಮನಾಗಿದ್ದಾರೆ. ನಂತರ ಗಿಲ್ಲಿ ಬಕೆಟ್ ಕೊಡದಿದ್ದರೆ ನಾನು ಏನು ಮಾಡುತ್ತೇನೆ ನೋಡು ಅಂತ ಅಲ್ಲಿಂದ ಬಂದು ರಿಷಾ ಗೌಡ ಅವರ ಬಟ್ಟೆಯನ್ನು ತೆಗೆದುಕೊಂಡು ನೆಲಕ್ಕೆ ಸುರಿದಿದ್ದಾರೆ. ಇದರಿಂದ ಕೋಪಗೊಂಡ ರಿಷಾ ಗೌಡ ಗಿಲ್ಲಿ ಗಿಲ್ಲಿ ಎಂದು ಕಿರುಚುತ್ತಾ ಬಂದು ಗಿಲ್ಲಿಯ ಜೊತೆ ಜಗಳಕ್ಕೆ ನಿಂತಿದ್ದಾರೆ. ನಂತರ ಗಿಲ್ಲಿಯ ಮೈ ಮುಟ್ಟಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತಾ ಗೌಡ ಮಧ್ಯಪ್ರವೇಶಿಸುತ್ತಾರೆ. ನಂತರ ಮನೆ ಮಂದಿ ಎಲ್ಲರೂ ಕೂಡ ಬರುತ್ತಾರೆ. ರಿಷಾ ಗೌಡ ಗಿಲ್ಲಿಗೆ ಕಿರುಚುತ್ತಾ ಬೈಯುತ್ತಾರೆ. ಇದೀಗ ಈ ಪ್ರೋಮೋ ನೋಡಿದಂತಹ ಜನ ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದೂವರೆಗೆ ಹುಡುಗಿಯರು ಹುಡುಗರಿಗೆ ಹೊಡೆದಿಲ್ಲ, ಆದರೆ ಈ ಬಾರಿ ರಿಷಾ ಗೌಡ ಗಿಲ್ಲಿಗೆ ಹೊಡೆದಿರುವುದು ಗಿಲ್ಲಿ ಅಭಿಮಾನಿಗಳಿಗೆ ಬೇಸರ ತಂದಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page