ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ಗಿಲ್ಲಿ ನಟನ ಕಾಮಿಡಿ ಮೋಡಿಗೆ ಜನ ಗೆಲ್ಲಿಸ್ತಾರಾ…?

BBK12: ಬಿಗ್‌ ಬಾಸ್‌ ಕನ್ನಡ ಸೀಸನ್12 ರಲ್ಲಿ ಗಿಲ್ಲಿನಟ ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತು. ಆದರೆ ಗಿಲ್ಲಿ ಮನೆಯೊಳಗೆ ತನ್ನದೇ ಶೈಲಿಯಿಂದ ಜನರ ಮನ ಗೆಲ್ಲುತ್ತಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಗಿಲ್ಲಿ ನಟ ಈ ಹಿಂದೆ ರಿಯಾಲಿಟಿ ಶೋ ಮೂಲಕ ಜನರ ಮನಗೆದ್ದ ನಟ. ಅದೇ ಈಗ ಬಿಗ್‌ ಬಾಸ್‌ ಮನೆಗೆ ಇವರನ್ನು ಕರೆದುಕೊಂಡು ಬಂದಿದೆ. ಕಾಮಿಡಿ ಮಾತಿನಿಂದಲೇ ಗಿಲ್ಲಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬಂದಿರುವ ಇವರು ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರ ಜೊತೆ ಹೊಂದಾಣಿಕೆಯಿಂದ ಇದ್ದಾರೆ ಅಂತ ಎಪಿಸೋಡ್ಸ್‌ ನೋಡುವಾಗ ತಿಳಿಯುತ್ತದೆ. ಗಿಲ್ಲಿ ಎಂದೇ ಫೇಮಸ್‌ ಆಗಿರುವ ಇವರು ಅದ್ಭುತ ಕಾಮಿಡಿಯನ್‌ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೇ ಕಾಮಿಡಿ ವಿಷಯಕ್ಕೆ ಮನೆಯವರೆಲ್ಲ ಟೀಕಿಸುತ್ತಿದ್ದಾರೆ. ಪ್ರೇಕ್ಷಕರೂ ಒಂದಷ್ಟು ಜನ ಗಿಲ್ಲಿದು ಬರೀ ಕಾಮಿಡಿ ಅಷ್ಟೇ ಎನ್ನುತ್ತಿದ್ದಾರೆ.

ಗಿಲ್ಲಿ ನಟನ ಹಿನ್ನೆಲೆ ಏನು..?

ಗಿಲ್ಲಿ ಮೊದಲು ಲವ್‌ ಅಂತ ಒಂದು ಟ್ರ್ಯಾಕ್‌ ಶುರುಮಾಡಿದ್ರು. ಕಾವ್ಯ ಶೈವ ಜೊತೆ ಗಿಲ್ಲಿ ಲವ್‌ ಅಂತ ಓಡಾಡಿ, ನಂತರ ಅಣ್ಣ ಅಂತ ಕಾವ್ಯ ಜೊತೆಗೆ ಕರೆಸಿಕೊಂಡರು. ಕಾಮಿಡಿ ಪಂಚ್‌ ಕೊಡುವ ಗಿಲ್ಲಿನೇ ಈ ಬಾರಿ ಬಿಗ್‌ ಬಾಸ್‌ ಎಂಟರ್‌ಟೈನರ್‌ ಅಂತ ವೀಕ್ಷಕರು ಫಿಕ್ಸ್‌ ಆಗಿಬಿಟ್ಟಿದ್ದಾರೆ. ಈ ಬಾರಿ ಟ್ರೋಫಿ ಗೆಲ್ಲೋದು ಕೂಡ ಗಿಲ್ಲಿನೇ ಅನ್ನೋ ಮಾತುಗಳು ಕೂಡ ಜೋರಾಗಿವೆ. ಗಿಲ್ಲಿಯ ನಿಜವಾದ ಹೆಸರು ನಟರಾಜ್‌ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದವರು. ಇವರು 10ನೇ ತರಗತಿ ಪೂರ್ಣಗೊಳಿಸಿದ 2 ವರ್ಷಗಳ ಕೋರ್ಸ್‌ ಐಟಿಐ ಮಾಡಿದ್ದಾರೆ. ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ ಕಾಮಿಡಿಯಿಂದ ಜನರ ಮನಗೆಲ್ಲುತ್ತಿದ್ದಾರೆ.

ಗಿಲ್ಲಿ ಕಾಮಿಡಿಗೆ ಜನ ನಿಜಕ್ಕೂ ಮರುಳಾಗ್ತಿದ್ದಾರಾ..?

ಗಿಲ್ಲಿ ಕಾಮಿಡಿ ನೋಡಿ ಜನ ಎಷ್ಟು ಇಷ್ಟ ಪಡ್ತಾರೋ ಅಷ್ಟೇ ಜನ ತಮಾಷೆ ಅಲ್ಲ ಅಂತಾನೂ ಹೇಳ್ತಾರೆ. ಪ್ರತೀ ಸಮಯದಲ್ಲಿ ಕಾಮಿಡಿ ಅಷ್ಟೇನು ವರ್ಕ್‌ ಆಗಲ್ಲ ಅಂತ ಜನರು ಹೇಳುತ್ತಿದ್ದಾರೆ. ಕೆಲವು ಬಾರಿ ಗಿಲ್ಲಿ ನಗಿಸೋಕೆ ಪ್ರಯತ್ನ ಪಡ್ತಾರೆ ಆದ್ರೆ ಅದು ಕಾಮಿಡಿ ಅಂತ ಅನಿಸೋದೆ ಇಲ್ಲ. ಮಾತು ಮಾತಿಗೆ ಕಾಮಿಡಿಯಲ್ಲೇ ಮಾತನಾಡೋದು ಎಲ್ಲೋ ಒಂದು ಕಡೆ ಜನರಿಗೆ ಇಷ್ಟ ಆಗ್ತಿಲ್ಲ. ಇದರಿಂದ ಎಲ್ಲೋ ಒಂದು ಕಡೆ ಓವರ್‌ ಆಗಿ ನಗಿಸೋಕೆ ಟ್ರೈ ಮಾಡುತ್ತಾರೆ ಎಂದು ನೋಡುಗರಿಗೆ ಅನಿಸಿದ್ದೂ ಉಂಟು. ನಿಮ್ಮ ಪ್ರಕಾರ ಗಿಲ್ಲಿ ಬಗ್ಗೆ ಏನನಿಸುತ್ತದೆ..ತಿಳಿಸಿ..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page