Kukke subrahmanya: ದಕ್ಷಿಣ ಕನ್ನಡ ಪ್ರಸಿದ್ಧ ದೇವಸ್ಥಾನಗಳ ಆಗರ. ಪ್ರಕೃತಿಯ ಮಧ್ಯೆ ಕಾನನದ ಮಧ್ಯೆ ದೇವಾಲಯಗಳನ್ನು ಒಳಗೊಂಡ ಪ್ರವಾಸಿ ತಾಣ. ಈ ಸಾಲಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಈ ಸ್ಥಳಕ್ಕೆ ಬಂದು ದೇವರ ದರ್ಶನ ಪಡೆದುಕೊಳ್ಳುತ್ತಾರೆ.
ಕುಮಾರಪರ್ವತದ ಎದುರು ಕುಕ್ಕೆ ಸುಬ್ರಹ್ಮಣ್ಯನ ವಾಸಸ್ಥಳ..!
ಬೆಂಗಳೂರು ಕಡೆಯಿಂದ ಬರುವ ಮಂದಿ ಗುಂಡ್ಯ ಜಂಕ್ಷನ್ ನಿಂದ ಗುಂಡ್ಯ ಕಡೆಗೆ ಬಂದು ಅಲ್ಲಿ ಒಂದು ಟೀ ಕುಡಿದು ಅಲ್ಲಿಂದ ಬಲ ರಸ್ತೆಯಿಂದ ಬಂದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಬಹುದು. ಕಾಡುಗಳೇ ಕಂಡುಬರುವ ಈ ರಸ್ತೆಯಲ್ಲಿ ಕಾಡುಗಳ ಮಧ್ಯೆ ದಾರಿಯುದ್ದಕ್ಕೂ ತಂಗಾಳಿಯಿಂದ ಕೂಡಿದ ವಾತಾವರಣದ ಜೊತೆ ದೇವಸ್ಥಾನಕ್ಕೆ ಬರಬಹುದು. ದೇವಸ್ಥಾನದ ಎದುರು ಎದ್ದು ಕಾಣುವ ಕುಮಾರಪರ್ವತ ನೋಡಲು ಅಂದ. ಇನ್ನು ದೇವಸ್ಥಾನದ ಪಕ್ಕ ಅಂಗಡಿಗಳ ಸಾಲುಗಳನ್ನು ಕಾಣಬಹುದು. ದೇವಾಲಯವನ್ನು ಪ್ರವೇಶಿಸಲು ಯಾತ್ರಿಕರು ಕುಮಾರಧಾರ ನದಿಯನ್ನು ದಾಟಬೇಕು. ಇದು ದಕ್ಷಿಣ ಭಾರತದ ಅತ್ಯಂತ ಪೂಜ್ಯ ಮುರುಗ ದೇವಾಲಯಗಳಲ್ಲಿ ಒಂದಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪುಟ್ಟ ಕಥೆ ಓದಿ..!
ವಾಸುಕಿ, ಶಿವನ ಕಟ್ಟಾ ಸರ್ಪ ಭಕ್ತ. ಗರುಡನ ಸಂಪರ್ಕವನ್ನು ತಪ್ಪಿಸಲು ಅವನು ಸುಬ್ರಹ್ಮಣ್ಯನಲ್ಲಿ ಆಶ್ರಯ ಪಡೆದನು. ಸರ್ಪಗಳು ಮತ್ತು ಹದ್ದುಗಳು ಪ್ರತಿಸ್ಪರ್ಧಿಗಳು ಮತ್ತು ರಣಹದ್ದುಗಳು ಹಾವುಗಳನ್ನು ಕೊಲ್ಲುತ್ತವೆ. ಸುಬ್ರಹ್ಮಣ್ಯ ವಾಸುಕಿಯನ್ನು ಆಶೀರ್ವದಿಸಿ ಅವನ ಮುಂದೆ ಕಾಣಿಸಿಕೊಂಡನು. ಅಂದಿನಿಂದ, ವಾಸುಕಿಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಷಷ್ಠಿ, ಕಿರು ಷಷ್ಠಿ, ನಾಗರ ಪಂಚಮಿ, ನಾಗಾರಾಧನೆ ಹಬ್ಬಗಳಿಗೆ ಅಪಾರ ಗೌರವವಿದೆ. ಉಳಿದಂತೆ ಯುಗಾದಿ, ದೀಪಾವಳಿ ಮತ್ತು ಮಕರ ಸಂಕ್ರಾಂತಿ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ.
ಮಕ್ಕಳಿಲ್ಲದ ದಂಪತಿಗಳಿಗೆ ಮಕ್ಕಳಾಗುತ್ತೆ..!
ಇಲ್ಲಿ ಸರ್ಪ ದೋಷ ಅಥವಾ ಸರ್ಪಗಳಿಂದ ಉಂಟಾಗುವ ನಕಾರಾತ್ಮಕ ಬಾಧೆಗಳು ದೂರವಾಗುತ್ತವೆ. ಮಕ್ಕಳಿಲ್ಲದ ದಂಪತಿಗಳಿಗೆ ಸಂತತಿಯನ್ನು ದಯಪಾಲಿಸಲು ನಾಗಪ್ರತಿಷ್ಠಾ ಪೂಜೆಯನ್ನು ನಡೆಸಲಾಗುತ್ತದೆ. ಸರ್ಪಗಳಿಂದ ಜೀವನದಲ್ಲಿ ಎದುರಾಗುವ ಯಾವುದೇ ಸವಾಲುಗಳು ಈ ದೇವಾಲಯದಲ್ಲಿ ನಿವಾರಣೆಯಾಗುತ್ತವೆ. ಇನ್ನು ಚರ್ಮಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳಲಿದ್ದರೆ ನಾಗದೇವರಿಗೆ ಹರಕೆ ಹೇಳಿದರೆ ನಿವಾರಣೆಯಾಗುತ್ತದೆ. ನಾಗರ ಹಾವನ್ನು ಸಾಯಿಸಿದರೆ ಇಲ್ಲಿಗೆ ಬಂದು ಸರ್ಪ ಸಂಸ್ಕಾರ ಮಾಡಿದರೆ ಜೀವನದಲ್ಲಿ ಬರುವ ತೊಂದರೆಗಳು ನಿವಾರಣೆಯಾಗುತ್ತವೆ.
ಜಾತಕ ದೋಷ ನಿವಾರಣೆಗೆ ಇಲ್ಲಿಗೆ ಬನ್ನಿ..! ಕುಜದೋಷಕ್ಕೆ ನಾಗನ ಆರಾಧಿಸಿ!
ಜಾತಕಗಳಲ್ಲಿನ ಸರ್ಪದೋಷ ಅಥವಾ ನಾಗದೋಷ, ಕಾಳಸರ್ಪದೋಷ ಇತ್ಯಾದಿ ದೋಷಗಳ ಕಾರಣದಿಂದ ಅನಾರೋಗ್ಯ, ಉದ್ಯೋಗದಲ್ಲಿ ಅಸಮಾಧಾನ,ಇತ್ಯಾದಿ ತೊಂದರೆಗಳನ್ನು ಅನುಭವಿಸುತ್ತಿರುವವರ ದೋಷಗಳಿಗೆ ಪರಿಹಾರ ಮಾಡಿಸಲು ಕರ್ನಾಟಕದಲ್ಲಿರುವ ಅತ್ಯಂತ ಪವಿತ್ರವಾದ ನಾಗರೂಪದಲ್ಲಿರುವ ಸುಬ್ರಹ್ಮಣ್ಯಸ್ವಾಮಿಯ ದೇವಸ್ಥಾನವಿರುವ ಕ್ಷೇತ್ರ ಎಂದರೆ ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಈ ಕ್ಷೇತ್ರಕ್ಕೆ ಪ್ರಪಂಚದ ನಾನಾ ಮೂಲೆಗಳಿಂದ ಭಕ್ತರು ಬಂದು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ, ಇತ್ಯಾದಿ ಸೇವೆ ಸಲ್ಲಿಸಿ ದೋಷಮುಕ್ತರಾಗಿ ಸುಖಜೀವನ ನಡೆಸುತ್ತಿದ್ದಾರೆ. ಕುಜದೋಷವಿರುವವರೂ ಸಹಾ ಇಲ್ಲಿ ಪರಿಹಾರ ಕಾಣುತ್ತಾರೆ.ನಿಮ್ಮ ಕುಟುಂಬದಲ್ಲಿ ನೆಮ್ಮದಿಯಿಲ್ಲದೇ ಇದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ.. ನಾಗದೇವರು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











