Udupi: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಟಿ20 ತಂಡದ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಭೇಟಿ ನೀಡಿ ಕಾಪುದ ಅಮ್ಮನ ದರ್ಶನ ಪಡೆದರು.
ದೇವಿಶಾ ಶೆಟ್ಟಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇ| ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.
ದೇವಸ್ಥಾನದ ಪ್ರಾಂಗಣದ ಮುಂದಿರುವ ಬೃಹತ್ ಕಲ್ಲಿನ ಕಂಬವನ್ನು ಸೇವೆ ರೂಪದಲ್ಲಿ ಸೂರ್ಯಕುಮಾರ್ ದಂಪತಿ ಕೊಟ್ಟಿದ್ದರು. ಆ ಕಂಬದ ಮುಂದೆ ದೇವಿಶಾ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಟಿ20 ಪಂದ್ಯವನ್ನು ಆಡುತ್ತಿದ್ದಾರೆ ದೇವಿಶಾ ಶೆಟ್ಟಿ ಭರತನಾಟ್ಯ ಕಲಾವಿದೆಯಾಗಿದ್ದು ಮುಂಬೈನಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ.
ಇದನ್ನೂ ಓದಿ: ಭೀಕರ ಅಪಘಾತ: 24 ಸಾವು, 20 ಜನರಿಗೆ ಗಂಭೀರ ಗಾಯ
===============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=MjdrEqd9L9xZirpC











