ಬ್ರೇಕಿಂಗ್ ನ್ಯೂಸ್
ಕರ್ನಾಟಕ

Health : ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರ : ಉಪ್ಪನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಏನಾಗುತ್ತೆ ನೋಡಿ..!

Health : ಉಪ್ಪು, ಹುಳಿ ಹಾಗೂ ಖಾರ ಸರಿಯಾದ ಪ್ರಮಾಣದಲ್ಲಿ ಇದ್ದರೆ ಮಾತ್ರ ಆಹಾರ ರುಚಿಕರ. ಕೆಲವರಿಗೆ ಹೆಚ್ಚು ಹುಳಿ ಆಗೋದಿಲ್ಲ, ಇನ್ನು ಕೆಲವರಿಗೆ ಹೆಚ್ಚು ಖಾರ, ಉಪ್ಪು ಆಗೋದಿಲ್ಲ. ಆದರೆ, ಈಗಿನ‌ ಆಹಾರ ಪದ್ಧತಿ ಹಾಗೂ ಬದಲಾಗುತ್ತಿರುವ ನಮ್ಮ ದೈಹಿಕ ಚಟುವಟಿಕೆಗಳನ್ನು ಹೋಲಿಕೆ ಮಾಡಿದರೆ ನಾವು ತಿನ್ನುವ ಪ್ರತೀ ತಿನಿಸುಗಳಲ್ಲಿಯೂ ಜಾಗರೂಕರಾಗಿರಬೇಕು. ಹಳೇ ಕಾಲ ಹೀಗಿರಲಿಲ್ಲ ದಿನ ಪೂರ್ತಿ ಒಂದೇ ಅಡುಗೆ ಒಂದೇ ಆಹಾರ ತಿಂದೇ ಜೀವನ ಸಾಗಿಸ್ತಾ ಇದ್ರು. ಆದ್ರೆ ಈಗ ಹೊತ್ತು ಹೊತ್ತಿಗೆ ಬಗೆಬಗೆ ಆಹಾರವನ್ನು ಆಯ್ಕೆ ಮಾಡುತ್ತೇವೆ. ಇದರಿಂದ ಅಷ್ಟೇ ಬೇಗ ಅನಾರೋಗ್ಯಕ್ಕೂ ಕುತ್ತಾಗುತ್ತೇವೆ. ಹೌದು… ಈಗಿರುವ ಆಹಾರ ಪದ್ಧತಿಯಲ್ಲಿ ಉಪ್ಪಿನ ಬಳಕೆ ಹಾಗೂ ಸೇವನೆಯಲ್ಲಿ ಎಚ್ಚರದಿಂದಿರಬೇಕು ಎಂದು ತಜ್ಞರು ಹೇಳುತ್ತಾರೆ.

ಉಪ್ಪಿನ ಪದಾರ್ಥ ಸೇವನೆ ಮಾಡುವ ಮುನ್ನ ಎಚ್ಚರ…!

ಉದಾಹರಣೆಗೆ ಮಧುಮೇಹ ಇಲ್ಲದಿದ್ದರೂ ಆಗಾಗ್ಗೆ ಮೂತ್ರ ವಿಸರ್ಜಿಸಲು ಹೋದರೆ, ನೀವು ಹೆಚ್ಚು ಉಪ್ಪು ಸೇವಿಸುತ್ತಿದ್ದೀರಿ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿ. ಹಾಗೂ ಅಧ್ಯಯನದ ಪ್ರಕಾರ ಈಗಾಗಲೇ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳಲ್ಲಿ ಅತಿಯಾದ ಉಪ್ಪು ಸೇವನೆಯು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ ಎಂದು ತಿಳಿಸುತ್ತದೆ. ಇನ್ನು ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗುತ್ತದೆ. ಇದು ದೇಹದಲ್ಲಿನ ನೀರಿನ ಮಟ್ಟದ ಸಮತೋಲನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ ನಿಮಗೆ ಹೆಚ್ಚು ಬಾಯಾರಿಕೆಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಹಾಗೂ ಅಧಿಕ ರಕ್ತದೊತ್ತಡವಿರುವವರು ಉಪ್ಪನ್ನು ಪ್ರಮಾಣಕ್ಕಿಂದ ಜಾಸ್ತಿ ಸೇವಿಸಿದ್ದಲ್ಲಿ ಪಾದಗಳು ಅಥವಾ ಕೈಗಳಲ್ಲಿ ಊದುಕೊಳ್ಳುವಿಕೆ ಪ್ರಾರಂಭವಾಗುತ್ತದೆ ಹಾಗಾಗಿ ಉಪ್ಪಿನ ಪದಾರ್ಥ ಸೇವನೆ ಮಾಡುವ ಮುನ್ನ ಎಚ್ಚರ…! ಇದರಿಂದ
ಕೆಲವೊಮ್ಮೆ ನಿಮ್ಮ ನಾಲಗೆಯ ರುಚಿಯೂ ಕೆಟ್ಟು ಹೋಗುವ ಸಾಧ್ಯತೆಯಿದೆ.

ಸೋಡಿಯಂ ಮಟ್ಟಕ್ಕಾಗಿ ಆಹಾರದ ಲೇಬಲ್ ಪರಿಶೀಲಿಸಿ :

ಅದಾಗ್ಯೂ ನೀವು ಸೇವಿಸುವ ಆಹಾರದಲ್ಲಿ ಉಪ್ಪಿನ ಸೇವನೆ ಕಡಿಮೆ ಮಾಡಬೇಕು ಅಂದ್ರೆ, ಹೊರಗಡೆ ಆಹಾರವನ್ನು ಖರೀದಿಸುವಾಗ ತಾಜಾ ಆಹಾರಗಳನ್ನು ಆಯ್ಕೆ ಮಾಡುವುದು ಉತ್ತಮ. ಸೂಪರ್ ಮಾರ್ಕೆಟ್‌ನಲ್ಲಿ ಖರೀದಿಸುವ ಯಾವುದೇ ಪದಾರ್ಥಗಳಲ್ಲಿ ಸೋಡಿಯಂ ಮಟ್ಟಕ್ಕಾಗಿ ಆಹಾರದ ಲೇಬಲ್ ಅನ್ನು ಪರಿಶೀಲಿಸಲು ಸೂಚಿಸಲಾಗುತ್ತದೆ. ಕೆಲವು ಸಾಸ್‌ಗಳು, ಮಸಾಲೆಗಳನ್ನು ಆಯ್ಕೆಮಾಡುವಾಗ ಸೋಡಿಯಂ ಇರದೇ ಇರುವುದನ್ನು ಆಯ್ಕೆ ಮಾಡುವುದು ಉತ್ತಮ. ಅಥವಾ ಹೋಟೆಲ್ ಗಳಲ್ಲಿ ತಿನ್ನುವಾಗ, ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವಾಗ, ಕಡಿಮೆ ಉಪ್ಪನ್ನು ಬಳಸುವ ಪದಾರ್ಥಗಳನ್ನಷ್ಟೇ ಆಯ್ಕೆ ಮಾಡಿ. ಇನ್ನು ಸಾಸ್ ಗಳಲ್ಲಿ ಸೋಡಿಯಂ ಮಟ್ಟ ಹೆಚ್ಚಿರುವ ಕಾರಣ ಅದನ್ನು ಸಂಪೂರ್ಣವಾಗಿ ತಪ್ಪಿಸಿ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ : Kukke subrahmanya: ನಾಗದೋಷ ನಿವಾರಣೆ..ಕುಜದೋಷಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬನ್ನಿ..!

…………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/FMZ3FR3jlrk?si=wTpwwQeZBjnS-vDL

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page