Bangalore : ಡಾ. ಮಹೇಂದ್ರ ರೆಡ್ಡಿ ಚರ್ಮರೋಗ ತಜ್ಞ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ತಮ್ಮ ಪತ್ನಿ ಡಾ. ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಾಗ ಸತ್ಯಗಳು ಬಯಲಾಗುತ್ತಲೇ ಇವೆ. ಇಂಜೆಕ್ಷನ್ ನೀಡಿ ಹಂತ ಹಂತವಾಗಿ ಕೃತಿಕಾಳ ಜೀವವನ್ನೇ ಕೊನೆಗಾಣಿಸಿದ್ದ ಮಹೇಂದ್ರನ ಮುಖವಾಡ ಇದೀಗ ಬಯಲಾಗಿದೆ.
ತನಿಖೆಯಲ್ಲಿ ಬಗೆದಷ್ಟೂ ಸತ್ಯದ ಬಯಲು :
ಹೌದು…2023 ರಲ್ಲಿಯೇ ಮಹೇಂದ್ರ ರೆಡ್ಡಿಯು ಮಹಿಳೆಯ ಹಿಂದೆ ಬಿದ್ದಿದ್ದು. ಆಕೆಯ ಜೊತೆ ಪದೇ ಪದೇ ಫೋನ್ ನಲ್ಲಿ ಸಂದೇಶವನ್ನು ಕಳಿಸುತ್ತಾ ದುಂಬಾಲು ಬಿದ್ದಿದ್ದ. ಕೃತಿಕಾ ಮದುವೆಯ ನಂತರವೂ ಹೆಚ್ಚಾಗಿ ಮೆಸೇಜ್ ಮಾಡುತ್ತಿದ್ದು ಈ ಕಿರಿಕಿರಿಯನ್ನು ತಪ್ಪಿಸಲು ಮಹಿಳೆಯು ಮಹೇಂದ್ರನನ್ನು ಬ್ಲಾಕ್ ಮಾಡಿದ್ದಳೆನ್ನಲಾಗಿದೆ. ಈ ಸಂಬಂಧ ಬ್ಲಾಕ್ ಮಾಡಿರುವುದನ್ನು ತಿಳಿದ ಮಹೇಂದ್ರ ಆಕೆಗೆ ಫೋನ್ ಪೇ ನಲ್ಲಿ ಮೆಸೇಜ್ ಮಾಡಿದ್ದಾಗಿ ತಿಳಿದು ಬಂದಿದೆ. ಎಸ್ ಎಸ್ ಎಲ್ ವರದಿ ಆಧರಿಸಿ ಪೋಲಿಸರು ತನಿಖೆ ಆರಂಭಿಸಿ, ಮೊಬೈಲ್ ಚಾಟ್, ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಅಷ್ಟೇ ಅಲ್ಲದೇ, ಕೃತಿಕಾಳನ್ನು ಕೊಲೆಗೈದ ನಂತರ ಮಹೇಂದ್ರ ಸಂಪರ್ಕದಲ್ಲಿದ್ದ ಮಹಿಳೆಗೆ ಕರೆ ಮಾಡಿ, ಮದುವೆ ಆಗೋಣ ಅಂತ ಹೇಳಿದನೆಂದು ವರದಿಯಾಗಿದೆ.
ಫೋನ್ ಪೇ ನಲ್ಲಿ ಸಂದೇಶ ರವಾನೆ :
ಪೋನ್ ಪೇ ಮೂಲಕವೇ I killed My Wife, Because of U… ಎಂದು ಸ್ನೇಹಿತೆಗೆ ಮಹೇಂದ್ರ ರೆಡ್ಡಿ ಮೆಸೇಜ್ ಕಳುಹಿಸಿದ್ದ. ಆ ಬಳಿಕ ಕಳುಹಿಸಿದ ಮೆಸೇಜ್ ಡಿಲೀಟ್ ಮಾಡಲು ತುಂಬಾ ಪ್ರಯತ್ನಿಸಿರುತ್ತಾನೆ. ಆದರೆ, ಅದು ಸಾಧ್ಯವಾಗದೆ ಈಗ ಪೋಲಿಸರ ಕೈಗೆ ಸಿಕ್ಕಿಬಿದ್ದಿರುತ್ತಾನೆ. ಸ್ನೇಹಿತೆ ಜೊತೆಗಿನ ಪೂರ್ಣ ಚಾಟಿಂಗ್ ಹಿಸ್ಟರಿಯನ್ನ ಪೊಲೀಸರು ರಿಟ್ರೀವ್ ಮಾಡಿಕೊಂಡಿದ್ದು, ವೈಯಕ್ತಿಕ ವಿಚಾರಗಳ ಬಗ್ಗೆ ಚಾಟಿಂಗ್ ಮಾಡಿರೋದು ಗೊತ್ತಾಗಿದ್ದು, ಪ್ರಕರಣ ಸಂಬಂಧ ಯುವತಿಯನ್ನ ಕರೆಸಿ ವಿಚಾರಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ : Somwarpet: ಅರಣ್ಯ ಇಲಾಖೆಯ ದೌರ್ಜನ್ಯ ವಿರುದ್ಧ ರೈತರ ಬೃಹತ್ ಹೋರಾಟ..!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/SDL5CAMpIQ0?si=MjdrEqd9L9xZirpC











